ಚೆಲ್ಲುಮನ!

ತೆರತೆರದಿ ಬಂದಪ್ಪಳಿಪುದು ಧೂಳಕಣ
ತೆರೆದಿಟ್ಟೊಡೆಲ್ಲದಕೂ ಈ ಚೆಲ್ಲುಮನ!

ಕೋಣೆಯ ಕಿಟಕಿಗಳನ್ನು ತೆರೆದಿಟ್ಟುಕೂತರೆ ಧೂಳುಗಳಂತು ಒಳಗೆ ತುಂಬಿಕೊಳ್ಳುವುದು ನಿಶ್ಚಿತ. ಮನೆಯ ಯಾವ ಕಿಟಕಿಯಿಂದ ತನುವಾದ ಗಾಳಿ ಬರಬಹುದೆಂದು ಗಮನಿಸಿ ಆ ಕಿಟಕಿಯನ್ನಷ್ಟೇ ತೆರೆದಿಟ್ಟೊಡೆ ಕೊಂಚ ತಂಪಿದ್ದೀತು ಒಳಗೆ. ಕಿಟಕಿ ಮುಚ್ಚಿದೊಡೆ ಕತ್ತಲಾದಲ್ಲಿ ಮಿಣುಕು ದೀಪದ ಬೆಳಕು ಉರಿಯಲಿ ಒಳಗೆ. ಇನ್ನೂ ಪ್ರತಿಕಾಲಕ್ಕೂ ಹೊರಗಾಳಿಯೇ ಅನುವೆಂದು ಬಗೆದೊಡೆ ಹಚ್ಚಿಡುವ ದೀಪಕ್ಕೆ ನೆಲೆಯೇ ಇರದು. ಬೆಳಕೇ ಕಾಣದಿದ್ದೀತು.

https://www.facebook.com/spchauta/posts/10151759088268674

1 comments on “ಚೆಲ್ಲುಮನ!

  1. Badarinath Palavalli ಹೇಳುತ್ತಾರೆ:

    ಯಾವುದೆಷ್ಟು ಇರಬೇಕೋ ಬದುಕಿನಲ್ಲಿ ಅಷ್ಟಿದ್ದರೆ ಅಲ್ಲವೇ ತನುವಾದ ಬದುಕು? ತುಂಬಾ ಚೆನ್ನಾಗಿ ಗುರುತಿಸಿದ್ದೀರಾ ಇಲ್ಲಿ.

Leave a reply to Badarinath Palavalli ಪ್ರತ್ಯುತ್ತರವನ್ನು ರದ್ದುಮಾಡಿ