ಅಂತರಂಗ!

ಕೇಕ್-ನ ಮೇಲೆ ಮೆತ್ತಲ್ಪಟ್ಟ ಕ್ರೀಮ್ ಕೇಕನ್ನು ತಾಜಾ ಎನಿಸುವಂತೆ ಮಾಡಿರಬಹುದು.

ತಿನ್ನುವಾಗ ಮಾತ್ರ ಕೇಕ್ ಎಷ್ಟು ತಿಂಗಳ ಹಿಂದಿನದೆಂಬ ಅರಿವಾಗಬಹುದು!

 

https://www.facebook.com/spchauta/posts/10151627530268674

Advertisements

ಹಿರಿಹಿಗ್ಗದಿರಿ, ಬರಿದಾದೀತು ಬದುಕು!

ಕೆಲದಿನಗಳ ಹಿಂದೆ ಕುಂದಾಪುರದ ಪುಟ್ಟಹಳ್ಳಿ ಹಾಲಾಡಿ ಸಮೀಪದ ರಟ್ಟಾಡಿ ಎನ್ನುವಲ್ಲಿನ ನನ್ನ ಸಂಬಂಧಿಕರ ಮನೆಗೆ ತೆರಳಿದ್ದೆ. ಗುರು ಸಮಾನರಾದ ಅವರು ಬೇರಾರೂ ಅಲ್ಲ. ನನ್ನ ತಂಗಿಯ ಮಾವ. ಶಾಲಾ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದರೂ ಕಲೆಯ ಬಗೆಗಿನ ಅವರ ಅಭಿಮಾನ ಮೆಚ್ಚತಕ್ಕದ್ದೇ. ನನ್ನ ನಿಶ್ಚಿತಾರ್ಥಕ್ಕೆಂದು ಕರೆಯಲು ಹೋದವನು ನಾನು. ಹಲವು ಕೆಲಸ ಕಾರ್ಯಗಳ ಮಧ್ಯೆ ಸಮಯದ ಅಭಾವ ನನಗಿದ್ದರೂ ಸುಮಾರು ಎರಡು ತಾಸು ಅವರ ಜೊತೆ ಮಾತಿಗಿಳಿದಿದ್ದೆ. ಅರುವತ್ತರ ಆಸುಪಾಸಿನ ಹಿರಿಯ ಜೀವವೊಂದರ ಜೊತೆ ಕಿಂಚಿತ್ತೂ ತಿಳಿದಿರದ ಬಡಪಾಯಿಯಾಗಿ, ಏಕಾಗ್ರನಾಗಿ ತಲೆಯಲ್ಲಾಡಿಸುತ್ತಾ ಕೂತೆ. ಕತೆ ಸಾಗಿತ್ತು ಅವರ ಜೀವನ ಪಯಣದ ಕೆಲ ಏಳುಬೀಳುಗಳ ಪರಿಚಯ ನನಗೆ ಸಿಕ್ಕಿತ್ತು. 

ಮೊದಲಾಗಿ ನನಗವರ ಉಪದೇಶ ಹೀಗಿತ್ತು – ಪ್ರಶಸ್ತಿಯ ಬೆನ್ನು ಹಿಡಿದು ಸಾಗಬೇಡ. ಅದಕ್ಕಾಗಿ ಹೋರಾಟ ಮಾಡದಿರು. ಅದಾಗಿಯೇ ಬಂದರೆ ತಿರಸ್ಕರಿಸದಿರು. ಈ ಬಗ್ಗೆ ಪ್ರಸ್ತುತದ ನೋವುಗಳನ್ನು ಅವರು ಬಿಚ್ಚಿಡುತ್ತಾ ತಾನು ಉತ್ತಮ ಶಿಕ್ಷಕನಾಗಿ ರಾಷ್ಟಪ್ರಶಸ್ತಿ ಗಳಿಸುವ ನಿಟ್ಟಿನಲ್ಲಿ ಶ್ರಮ ವಹಿಸಲೇ ಇಲ್ಲ. ನನಗದು ಬೇಕಾಗಿಯೇ ಇರಲಿಲ್ಲ, ನನ್ನ ವಿಧ್ಯಾರ್ಥಿಗಳು ನನ್ನಿಂದ ಕೊಂಚ ಅರಿವಿನ ದಾರಿ ಹಿಡಿದರೆ ಅದು ನನಗೆ ದಕ್ಕುವ ವಿಶ್ವಪ್ರಶಸ್ತಿ ಎನ್ನುವುದು ಅವರ ಮನದಾಳದ ಮಾತಾಗಿತ್ತು. ತಾನು ಶೇಣಿ ಮೊದಲಾದ ನುರಿತ ಯಕ್ಷಗಾನ ಕಲಾವಿದರೊಂದಿಗೆ ‘ತಾಳಮದ್ದಲೆ’ ಅರ್ಥಗಾರಿಕೆಯಲ್ಲಿ ಮೇಲುಗೈ ಸಾಧಿಸಿದರೂ ಅದನ್ನು ಕೊಚ್ಚಿಕೊಳ್ಳುವ ಜಂಭ ಕೊಂಚವೂ ನನ್ನ ಕಣ್ಣಿಗೆ ಬೀಳಲಿಲ್ಲ. ಕಿಸಾನ್ ಸಂಘದಲ್ಲಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದರೂ ಅದು ಊರ ರೈತರಿಗೋಸ್ಕರ, ನನ್ನ ಕೃಷಿಗೋಸ್ಕರ ಎನ್ನುವ ಈ ಹಿರಿಯ ಜೀವಿ ಈಗಲೂ ಉತ್ತಮ ಕೃಷಿಕ. ತನ್ನ ಕಾಲುಗಂಟು ನೋವಿನ ವಿಪರೀತ ಭಾದೆಯಲ್ಲೂ ಅಡಿಕೆ, ರಬ್ಬರ್, ವೆನಿಲ್ಲಾ ಬೆಳೆಗಳನ್ನು ಬೆಳೆಯುವ ಅನುಭವ ಹೊಂದಿರುವ ನುರಿತ ಕೃಷಿಕ. ಈಗಲೂ ಕೃಷಿಯಲ್ಲೇ ತನ್ನನ್ನು ತಾನು ತೊಡಗಿಸಿಕೊಂಡಿರುವ ಉದಾತ್ತ. 

ಇದೆಲ್ಲಗಿಂತ ಮಿಗಿಲಾಗಿ, ಮಂಕುತಿಮ್ಮನ ಕಗ್ಗಗಳು, ಮಹಾಭಾರತ, ರಾಮಾಯಣದಂದ ಮೇರುಕೃತಿಗಳ, ಅಲ್ಲಿನ ಜೀವನಧರ್ಮಗಳ ಬಗೆಗಿನ ಅವರ ತಿಳಿವಳಿಕೆ, ಅರಿವು ಬಾಯಿಪಾಠವಾಗಿರುವ ಹತ್ತು ಹಲವು ಮುಕ್ತಕ, ಸಾಹಿತ್ಯದ ಬಗೆಗಿನ ಒಲವು ನನ್ನನ್ನು ನಿಜಕ್ಕೂ ಅಚ್ಚರಿಗೊಳಿಸಿತ್ತು. ಈ ಹಿಂದೆ ಹಲವು ಬಾರಿ ಅವರನ್ನು ಭೇಟಿ ಮಾಡಿದ್ದೆನಾದರೂ ಜೊತೆಯಲಿ ಇಬ್ಬರೇ ಕೂತು ಮಾತನಾಡುವ ಪ್ರಸಂಗ ಬಂದಿರಲಿಲ್ಲ. ಇಂಥಹ ಅನುಭಾವಿಗಳನ್ನು ಗುರುತಿಸುವ ಕಾರ್ಯಗಳನ್ನು ನಮ್ಮೀ ಪ್ರಸ್ತುತ ಸಾಮಾಜಿಕ ವ್ಯವಸ್ಥೆ ಮಾಡುತ್ತಿಲ್ಲ ಎನ್ನುವ ನೋವು ನನ್ನ ಮನದಲ್ಲಿ ಮೂಡಿದಾಕ್ಷಣ, ಅವರೂ ಮುಂದುವರಿದು ಒಂದು ಮಾತೆಂದರು – ಮಾಡುವ ಕೆಲಸದಲ್ಲಿ ಶ್ರದ್ಧೆಯಿರಲಿ. ಎಲ್ಲರೂ ನಮ್ಮನ್ನು ಗುರುತಿಸಬೇಕೆನ್ನುವ ಧಾವಂತದಲ್ಲಿ ಸಮಾಜದಿಂದ ನಾವು ದೂರವಾಗುವುದು ಬೇಡ. ಯಾರಿಗೂ ಎಟುಕದಂತೆ ಮೇಲೆ ನಿಲ್ಲದಿರು. ಎಲ್ಲರೊಳು ಬೆರೆತು, ಸಾಮಾಜಿಕ ಕಳಕಳಿ ಮೆರೆವವರಾಗಬೇಕು. ಇಲ್ಲಿ ನಾನು ಅವರ ಮಾತುಗಳನ್ನು ಉದ್ಧರಿಸುತ್ತಿರುವುದು ಇಲ್ಲಿನ ಹಲ ಓದುಗರಿಗೆ (ಅದರಲ್ಲೂ ನಾನು ಉಚ್ಚ್ರಾಯ ಮಟ್ಟದವರು ಎನ್ನುವ ತಲೆಭಾರ ಹೊತ್ತವರಿಗೆ) ಹಿಡಿಸದಿದ್ದರೂ ನೇರಾನೇರವಾಗಿ ಮಾತನಾಡಲು ನಾನು ಹಿಂಜರಿಯುವುದಿಲ್ಲ. ಅದೇನೇ ಇರಲಿ ನಾವು ಉಚ್ಚ್ರಾಯ ತಲುಪಿ ಬಿಟ್ಟಿದ್ದೇವೆ ಎನ್ನುವ ಮನಸ್ಥಿತಿ ನಮ್ಮನ್ನು ಇನ್ನಷ್ಟು ಕೆಳಮಟ್ಟಕ್ಕೆ ಕೊಂಡೊಯ್ಯದಿರಲಿ ಎನ್ನುವ ಆಶಯ ನನ್ನದೂ ಕೂಡ. ಉಚ್ಚ್ರಾಯದಲ್ಲಿದ್ದರೂ ಇನ್ನೊಬ್ಬರಿಗೆ ಎಟುಕುವವರಂತಾಗಿ. ಅವರ ಕ್ಷಣದ ನೋವಿಗೆ ನಿಮ್ಮ ಸಾಂತ್ವನದ ಒಂದು ಹನಿ ಇರಲಿ. ಅವರ ಸಂತಸದ ಒಂದು ಘಳಿಗೆಯಲ್ಲಿ ನೀವವರನ್ನು ಒಂದಿಂಚು ಬೆನ್ನು ತಟ್ಟಿ. 

ಓ ಹಿರಿಯರೆನಿಸಿಕೊಂಡವರೇ, ನೀವೂ ಮನುಷ್ಯರೇ ತಾನೇ ಅನ್ಯರಂತೆ?
=====
https://www.facebook.com/photo.php?fbid=10151625742823674&set=a.10150201120203674.333813.695438673&type=1

ಫಲ!

ಗೊರಟೆಯಲೇನಿಹುದೆನದಿರು
ಹಣ್ಣ ರಸವ ಹೀರಿ ಬರಿದುಗೊಳಿಸಿ..
ಬಿಟ್ಟಿ ಬೆಳೆಯಲಿಲ್ಲ ಹಣ್ಣು
ಬಿರಿದು ತಾ ಬೆರೆದು ಮಣ್ಣೊಳಗೆ
ಚಿಗುರ ಹೊರಬಿಚ್ಚಿ ಪೊರೆದು
ತಾ ಬೇರಾಗಿ ಮರದೊಳಿಟ್ಟಿತು
ನಿನಗೆ ಮತ್ತೊಂದು ಹಣ್ಣ!