ವಿರಹ!

ಈ ಬಿಸಿಲಿಗೂ
ಗೊತ್ತಾಗಿಬಿಟ್ಟಿದೆ
ನೀನಿಲ್ಲವೆಂದು,
ನನ್ನಂತೆ ಅದೂ
ಬಿಸಿಯಾಗಿಬಿಟ್ಟಿದೆ!

Advertisements

ನದಿ!

ಕಡಲಿನೆದೆಯೊಳಗೆ ಕರಗುವ ಮುನ್ನ
ತಟದೆಡಬಲದಿ ಬೇರಚಾಚುವ
ಗಿಡಮರಗಳಿಗೊಂದಿನಿತು ನೀರನುಣಿಸಿ
ಹರಿವ ಹಸನಾಗಿಸಿ ನಲಿವ ನದಿಯಂತೆ,

ಹಸಿರ ನೆರಳಾಗಿ ನಿಲಬೇಕು ನರಳುವವಗೆ,
ಉಸಿರ ಉಳಿಸುತವನ ನಲಿಸಿ, ಇರುವ
ಎಸರನೆರೆದಾಸರೆಯಾಗಲೆನಿತು ಸುಖವು!

ಭರವಸೆ?

ದಾರಿಯಲೆಲ್ಲಿದೆ ತಂಪು?
ನೀಲ ಬಾನಲಿ ತೇಲ್ವ 
‘ಬಿಳಿ’ ಮೋಡಗಳೇ?
ಎದೆಯನುಬ್ಬಿಸಿ ನಿಂತ 
ಬರಡು ಬೆಟ್ಟಗಳೇ?

ಬರಿಯ ಬೆರಗಷ್ಟೆ…

ಒಣಗಲಣಿಯಾಗಿರುವ ಹಸಿರುಗಳೇ
ನೀವಾದರೂ ಕೊಂಚ ಉಸಿರಾಡಿ,
ಮುಂದುವರಿಯಬೇಕಿದೆ ನಾನು!

====

IMG-20140311-WA0009

ಅವಕಾಶ!

ಮಣ್ಣಿನಲಿ ಕರಗಿ ಮರೆಯಾಗುವ ಮೊದಲು ಒಣ ಹುಲ್ಲಿನ ಕಡ್ಡಿ ಹಕ್ಕಿಯ ಕೊಕ್ಕಿಗೋ, ಕಾಲಿಗೋ ಸಿಕ್ಕಿ ಆಶ್ರಯದ ಹೊಣೆ ಹೊರಬಹುದು. ಆದರೆ ಈ ಹೊಣೆಯಲ್ಲಿ ಹಕ್ಕಿಯ ಪಾತ್ರ ಮುಖ್ಯ. 

ಅವಕಾಶ ಹುಡುಕಿಕೊಂಡು ಬರಬೇಕು ಕೆಲವೊಮ್ಮೆ, ಎಲ್ಲ ಕಾಲಕ್ಕೂ ಹುಟ್ಟು ಹಾಕಲಾಗದು!

https://www.facebook.com/spchauta/posts/10152311546543674?stream_ref=10