ದೀಪ್ತಿ – ೪೩

ಅಂಗವಿಕಲನನು ಬಂಧು ತನಗಲ್ಲವೆಂದೆನದಿರು
ತರವಲ್ಲ ನಿನಗದು, ನಿನ್ನಂತರಂಗವದು ಊನ
ಸುಂದರ ನೀನೆಂಬುದದು ಅರೆಕ್ಷಣವೆಂದನೀ ಶಿರ್ವಜ್ಞ|

Advertisements

ದೀಪ್ತಿ – ೪೨

ಅಗ್ಗವನು ಹಗ್ಗವೆಂದುಚ್ಚರಿಸಿ ಹತ್ತನು ಅತ್ತೆನದಿರು
ಬೆಚ್ಚಿಬಿದ್ದಿಹೆ ನಾನಿಂದು ನಿನ್ನುಚ್ಚಾರಣೆಯ ಕಂಡು
ಸವಿಕನ್ನಡ ಸರಿಯರುಹಲು ಮೆಚ್ಚುವೆನು ಮನಸಾರೆ |ಶಿರ್ವಜ್ಞ|

ದೀಪ್ತಿ – ೪೧

ನಿನ್ನನಾರೂ ಮೆಚ್ಚರೆನುತ ಅನ್ಯರನು ಕುರಿಯೆನಬೇಡ,
ಹಚ್ಚಿಕೊಳದಿರು ಹುಚ್ಚುತನ ಕೊಚ್ಚಿಹೋದೀತು ಕಸುವು,
ಹೆಚ್ಚುವುದು ನಿನ್ನಂದ ಮುಚ್ಚುಮರೆಯಿಲ್ಲದ ನೇರನುಡಿಯಿರೆ ಶಿರ್ವಜ್ಞ||