ದೀಪ್ತಿ – ೧೮

ಅಳುಕದಿರು ಮನವೇ ಹುಳುಕುಗಳಿಗೆ
ಬದುಕೆದುರು ಬಂದರಿಗಳೆದುರಿಸು ನೀ
ಸುಡುಮಣ್ಣ ಸತುವ ಹೀರಿ ಹೂವ ಬಿಡು ಶಿರ್ವಜ್ಞ!

Advertisements

ದೀಪ್ತಿ – ೧೫

ದಿನವದು ಜಾರಿ ಇಂದಿಗಿಲ್ಲದ ನಿನ್ನೆ, ಇಂದು ಮತ್ತದೇ ನಿನ್ನೆಯಾಗದೆ
ನಾಳೆಗಳಿಗೆ ಹೊಸತು ಹೆಸರ ಉಡಿಸಿ, ನವ್ಯತೆಯ ಹುಟ್ಟುಗಳೊಳಗೆ
ಛಲ ಮುಂದಿಟ್ಟು ಚಪಲದ ನಾಲಗೆಗೆ ನವರುಚಿಯ ನೀಡೆಂದನೀ ಶಿರ್ವಜ್ಞ