ದೀಪ್ತಿ – ೨೬

ಬರಿಯ ಕೈಯಲಿ ಬಂದು ಬಿರಿದು ಬಾಯಲಿ ಅತ್ತವಗೆ
ಟೊಂಕದಲಿ ಬಿಂಕಬಿನ್ನಾಣ, ಕೊಂಕು ವೈಯ್ಯಾರವೇಕೆ?
ಸುಂಕವಿಲ್ಲದೆ ತೆರಳುವವಗೆ ಅಂಕದಾಕರ್ಷಣೆಯೇಕೆ ಶಿರ್ವಜ್ಞ!

Advertisements

ದೀಪ್ತಿ – ೨೫

ಬಸಿದು ಬೆವರ ದುಡಿತದೊಳೆನ್ನ ಬೆಸೆದು 
ಮದುವಣಗಿತ್ತಿಯಂದದಿ ಮನಸುಮವರಳಿಸಿ
ಅನುದಿನವನ್ನದೇವನ ಮುದದಿಂದನುಭವಿಸೆ ಸುಖವು ಶಿರ್ವಜ್ಞ!