ಕಾರಣ?

ಹೆದರದಿರು ಬುವಿಯೇ,

ನನ್ನವಳ ನೋಡಲು
ಹೋಗುತ್ತಿದ್ದೇನೆ,

ಮಳೆ ಬರಬಹುದು
ಬರುವ ವಾರ…!

Advertisements

ಹೊರೆ?

ಅರಿವಿನ
ಸರಹದ್ದಿನೊಳಗಿರದ
ನನ್ನ ಕೃತಿಗಳನ್ನೆಲ್ಲ
ದೂರವೆಸೆಯಬೇಕೆಂದಿದ್ದೇನೆ
ಓಹ್
ಇಷ್ಟಿವೆಯೇ ನನ್ನೊಳಗೂ?

ಎಲ್ಲವನೂ
ಹೊರಲಾಗುತ್ತಿಲ್ಲ…!

======
xxxx

 

ಹೂವು!

ಹೂದೋಟದಲ್ಲಿ ಅರಳುವ ಎಲ್ಲ ಹೂವುಗಳನ್ನು ಕಣ್ಣಿನಲ್ಲಿ ತುಂಬಿಸಿಕೊಳ್ಳಲಾಗದು. ಮನಸೂರೆಗೊಂಡ ಒಂದೋ ಎರಡೋ ಸಂಜೆ ಮಲಗುವಾಗ ಮತ್ತೆ ಮತ್ತೆ ಕಾಡುತ್ತವೆ.

—> ಹೂವ-ರಸ!

ಉರಿ!

ಉರಿಯು ಜಾಸ್ತಿಯಾದಾಗ ಕರಿಯ ಕಾವಲಿಯೂ ಕೆಲವೊಮ್ಮೆ ತೊಳೆಯುವಾಗಲೂ ಕಳೆಯದ ಕೊಳೆಯನ್ನು ಕಳಚಿಕೊಳ್ಳಬಹುದು.

ಹಾಗಾಗಿ, ಉರಿ ಒಳ್ಳೆಯದೇ. ಎಲ್ಲ ಸಲವೂ ಅಲ್ಲ, ಕೆಲವೊಮ್ಮೆ.

—-> ಚೌ….

ಸ್ನಾನ!

ನಿನ್ನೆ ನಡೆದ ರಸ್ತೆಯೇ ಇರಬಹುದು ಇಂದು ಕೂಡ. ಆದರೆ ಮೆತ್ತಿಕೊಳ್ಳುವ ಧೂಳು ನಿನ್ನೆಯ ತೆರನಾದದ್ದೇ ಎಂಬುದನ್ನು ಖಚಿತವಾಗಿ ಹೇಳಲಾಗದು.

ದೈನಂದಿನ ‘ಸ್ನಾನ’ ಮುಕ್ತಿಯ ಸಾಧನ!

—>ಚೌ…

ನಡೆ?

ಓ ಕ್ಯಾಮೆರಾಗಳೇ
ನಿಮ್ಮನ್ನು ಕೆಲವೊಮ್ಮೆ
ದ್ವೇಷಿಸುತ್ತೇನೆ ನಾನು;

ತಿಂಗಳಾನುಗಟ್ಟಲೆ ತೊಳೆಯದ
ಪ್ಯಾಂಟು ಶರ್ಟುಗಳೊಳಗಿಂದ
ಹೊರಚಾಚಿದ ದೇಹಗಳನ್ನೆಲ್ಲ
ನೀವು ಚಂದಗಾಣಿಸುತ್ತೀರಲ್ಲ…

ನಿಮಗ್ಯಾಕೆ ನೇರ ನಡೆನುಡಿಯಿಲ್ಲ?