ಋಣ?

ಮನೆಯಂಗಳಕೆ
ಚಾಚಿರುವ ರೆಂಬೆಗಳಲಿ
ಅರಳಿರುವ ಸುಮಗಳ
ಘಮಗಳನ್ನೆಲ್ಲ ಮರಳಿಸಬೇಕಿದೆ,

ನೆರೆಯವರ ಕಣ್ಣುಗಳಲಿ
ನೀರೂರಿಸಿದ ಋಣ
ಹೊತ್ತು ನಿಂತಿದೆ ನನ್ನ ನಾಸಿಕ!

Advertisements

ಸೆಕೆಂಡ್ ‘ಹ್ಯಾಂಡ್’ ಕತೆಗಳು!

ರಾಜಕಾರಣಿಯೊಬ್ಬರ ಎರಡನೇ ಸಂಬಂಧದ ಬಗ್ಗೆ ವಿಸ್ತ್ರತ ಚರ್ಚೆ ನಡೆಸಿ ಆ ವಾಹಿನಿಯ ವಾರ್ತಾವಾಚಕರು ಮನೆ ತಲುಪಿದಾಗ ಅವರ ಹೆಂಡತಿಯರಿಬ್ಬರು ಜುಟ್ಟು ಎಳೆದಾಡುವುದರಲ್ಲಿ ತಲ್ಲೀನರಾಗಿದ್ದರು!

ಪುರಾಣ?

ರಾಮನೂ ಇದ್ದಾನೆ
ರಾವಣನೂ ಇದ್ದಾನೆ,
ಬದಲಾಗಿದ್ದು ಬರಿಯ
ಬಿಲ್ಲುಗಳು, ವೇಷಗಳೂ!

ಎಲ್ಲರೂ ಹನುಮಂತರೆ,
ಹಾರುತಿದ್ದಾರೆ ನೆಲದಲ್ಲೇ
ಬಾಲ ಮರೆಯಾಗಿದೆ ಅಷ್ಟೆ!

ಸೀತೆ ಮಾತ್ರ ಸಿಗುತ್ತಿಲ್ಲ!

ಅವಕಾಶ!

ಕನ್ನ ಹಾಕುವವರು ಕೆಲವೊಮ್ಮೆ ಮನೆಯೊಳಗಿರುವವರಿಗಿಂತ ಮನೆ ಕಾಯುವ ನಾಯಿಯನ್ನು ಬಹುಶಃ ಗಮನಿಸುತ್ತಿರಬೇಕಾಗಬಹುದು! ನಾಯಿ ಇಲ್ಲದೇ ಇರುವಾಗ ಮನೆಯೊಳಗೆ ಮಣೆ ಹಾಕುವುದು ಸುಲಭವಾಗಬಹುದು!