ದೀಪ್ತಿ – ೮೧

ಇತ್ತಲೊಂದು ಅತ್ತಲೊಂದು ಚಿತ್ತಗಳೆರಡು ನಗುತಿರಲು
ಅತ್ತ ಮನವೊಂದು ಮಧ್ಯದೊಳುಲ್ಲಸಿತ
ಹಿತಗಳೆನೆತ್ತಿಕೊಳ್ಳುವ ಭಾಗ್ಯ ನಿತ್ಯ ಬರಲೆನಗೆ ಶಿರ್ವಜ್ಞ!

ಹೊತ್ತು!?

ನಿನಗಿದೋ ನಮನ,
ದಿನದಾರು ಘಂಟೆ
ನನ್ನಯ ಚಿಂತೆಗಳನು
ಹೊತ್ತು ನಿಲ್ಲುತ್ತೀಯಲ್ಲ,
ನಿನ್ನ ಪ್ರೀತಿಸದಿರಲಾದೀತೆ
ಹೇಳು ನೀ ಕರುಣಾಮಯಿ…
.
.
ಓ ಕತ್ತಲೆಯೇ!

ವಿಜ್ಞಾನ!

ಮುಂದೇನು ಅನ್ನುವುದನ್ನು ವಿಜ್ಞಾನ ಕೆಲವೊಮ್ಮೆ ನಮಗೆ ಬಹಳ ಮುಂಚಿತವಾಗಿ ತಿಳಿಸಿಕೊಡುತ್ತದಾದರೂ, ಮುಂದಾಗಬಹುದಾದ ಅನಾಹುತಗಳನ್ನು ಇಂದೇ ತಿಳಿಸಿ ಇಂದು-ನಾಳೆಯ ಅಂದಚೆಂದದ ಮಂದಹಾಸವನ್ನು ಮಣ್ಣುಪಾಲಾಗಿಸಬಹುದು.

—–>
ಚೌ…

ಪವರ್ ಆಫ್ ಅಟಾರ್ನಿ ಕತೆಗಳು!

ಅಂದು ಆಷಾಢ ಮಾಸದ ಮೊದಲ ದಿನ…

ನೀವು ಬಾಡಿಗೆ ಮನೆಯಲ್ಲಿರುವವರು, ನೀವ್ಯಾಕೆ ಕೊಡುತ್ತೀರಿ? ಓನರ್ ಆದ ನಾನು ಯಾವತ್ತೂ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬೇಕಾದ್ರೆ ಆ ಮನೆಯವರು ಹಾಕಿಸಿಕೊಳ್ಳಲಿ ಬಿಡಿ
ಅವರ ಮನೆಯೆದುರಿಗೆ ತಾನೇ ಆ ಕಂಬ ಇರೋದು!

ಸರಿ ಸರ್…
——
ಅಂದು ಶ್ರಾವಣ ಮಾಸದ ಮೊದಲ ದಿನ.

ಅಂಬುಲೆನ್ಸ್ 108 ರ ಚೀರಾಟದ ಸದ್ದು ಆ ಕಾಲನಿಯಲ್ಲಿ.
——————
ಸರ್ ಬಾಡಿಗೆ ತಗೊಳ್ಳಿ.
ಬೇಗ ಕೊಟ್ಟಿದ್ದಕ್ಕೆ ಥ್ಯಾಂಕ್ಸ್
ಪರ್ವಾಗಿಲ್ಲ ನಿಮ್ಮ ಅರ್ಜೆನ್ಸಿ ನನಗೆ ಅರ್ಥ ಆಗುತ್ತೆ!

ಅಳ್ಬೇಡಿ ಸರ್ ಪ್ಲೀಸ್, ಅತ್ರೆ ಅವರೇನು ವಾಪಾಸ್ ಬರ್ತಾರ?

… ಇಲ್ಲ. ಐಯಾಮ್ ಹೆಲ್ಪ್ ಲೆಸ್, ಒಂದ್ ಹೆಲ್ಪ್ ಮಾಡ್ತೀರ?…
ಏನ್ಸಾರ್ ಮಾಡ್ಬೇಕು, ಹೇಳಿ…
ಕೆಪಿಟಿಸಿಎಲ್ ಜೊತೆ ಮಾತಾಡಿ ಈ ಕಂಪೆನ್ಸೇಶನ್ ಕ್ಲೈಮ್ ಬೇಗ ಮಾಡ್ಸಿ..

ಸರಿ ಸಾರ್ ನಾನು ನಿಮ್ಮ ಟೆನೆಂಟ್ ಆದ್ರೂ ಈ ಕೆಲ್ಸ ಮಾಡ್ಸಿ ಕೊಡ್ತೀನಿ! ಕೊಡಿ ಆ ಪೇಪರ್ ಕೊಡಿ!
======