ನಿರ್ಲಕ್ಷ್ಯದ ಕತೆಗಳು!

ಆ ಊರಿನ ಕಮ್ಮಾರನ ಕುಲುಮೆಯಲ್ಲಿ ಮಚ್ಚನ್ನಣಿಗೊಳಿಸುತ್ತಿರುವ ಭಯಂಕರ ಸದ್ದುಗಳಿಗೆ ಪಕ್ಕದ ಫಾರ್ಮಿನ ಕೋಳಿಗಳು ಕಾಳು ಹೆಕ್ಕಿ ತಿನ್ನುವುದನ್ನು ನಿಲ್ಲಿಸಿರಲಿಲ್ಲ!

Advertisements

ಅಪ್ರಬುದ್ಧ?

ಬಣ್ಣಬಳಿದು ಕಣ್ಣಮುಚ್ಚಿ
ಕೈಕಟ್ಟಿ ಕೂರುವುದು
ನಾ ಬುದ್ಧನಾಗುವುದಕ್ಕಲ್ಲ…
ಸಣ್ಣತನದ ಸುಣ್ಣಗಳೆಲ್ಲವ
ಉರಿಸುರಿಸಿ ದುರಿತಗಳ
ದೂರವೆಸೆವ ದೂರ್ವಾಸನಾಗುವುದಕೆ!

=====
20140124_205501

ಸಾರ!

ಮಣ್ಣು, ತನ್ನೊಳಗಿನ ಸಾರವನ್ನು ಉದಾರವಾಗಿ ಬಿಟ್ಟುಕೊಡುವ ಪ್ರಕ್ರಿಯೆಯಲ್ಲಿ ಬೇರು ಯಾವ ಮರದ್ದೆಂಬುದನ್ನು ಪರೀಶೀಲಿಸುವುದಿಲ್ಲ! 
ಹೀರುವ ಶಕ್ತಿ ಬೇರಿಗಿರಬೇಕಷ್ಟೆ!

ಮಾನ-ದಂಡ!

ಯಾವುದೇ ಮನ್ನಣೆ ಅಥವಾ ಪುರಸ್ಕಾರ ನೀಡಿದ ನಂತರ, ಆ ಪುರಸ್ಕಾರದ ‘ಮಾನದಂಡ’ದ ಬಗ್ಗೆ ಆಯ್ಕೆ ಮಾಡಿದವರಿಗೇ ಅಸಮಾಧಾನವಿದ್ದರೆ, ಆಯ್ಕೆ ಮಾಡಿದವರು ‘ಅನರ್ಹ’ರೇ ಹೊರತು ಪ್ರಶಸ್ತಿ ಪಡೆದವರಲ್ಲ!