ಬರೆ!

ಬರಿದೇ ಕಕ್ಕಲಾಗದು 
ಕರುಳೊಳಗೆ 
‘ಅನ್ನ’ವೊಂದಿಷ್ಟು
ಹಿಡಿಸದ ಹೊರತು!

Advertisements

ದೊಂದಿ!

ದೊಂದಿ ಹಚ್ಚಿಕೊಂಡು ಕತ್ತಲದಾರಿ ಸೀಳಿ ಮುನ್ನುಗ್ಗುತ್ತಿರುವಾಗ ‘ಬೆಂಕಿಪೆಟ್ಟಿಗೆ’ ಕೊಟ್ಟವನನ್ನು ಮರೆಯದಿರಿ!

https://www.facebook.com/spchauta/posts/10151426352408674

ಬೇಟೆ!

ಆತ ಹಿಂದಿಯವ. 

ಕನ್ನಡ ಕಲಿತು “ಬೇಟೆ” ಎನ್ನುವ ಶೀರ್ಷಿಕೆಯಲ್ಲಿ ಒಬ್ಬ ಹುಡುಗ ಮಾಡುವ “ಅತ್ಯಾಚಾರ”ವನ್ನು ಗುರಿಯಾಗಿಸಿಕೊಂಡು ಕಥೆ ಬರೆದ. 

ಅವನ ಮಗ ತನ್ನದೇ ಕಥೆಯೆಂದು ಮಿತ್ರರಿಗೆಲ್ಲ ಅದರ ಪ್ರತಿ ಹಂಚಿದ!

 

https://www.facebook.com/spchauta/posts/10151426296863674

ಸೋರಿಕೆ!

ಅನ್ಯರ ಮನೆಯ ಛಾವಣಿ ಕಂಡು ನಗುವ ಮೊದಲು, ನಮ್ಮ ಮನೆ ಸೋರುವುದನ್ನು ನಿಲ್ಲಿಸೋಣ. ಸಾಧ್ಯವಾದರೆ ಅವರ ಮನೆಯ ಛಾವಣಿ ಸೋರದಂತೆ ಮಾಡಲು ಸಲಹೆ/ಸಹಾಯಹಸ್ತ ಚಾಚೋಣ. ಏನಂತೀರಿ?
====
ಶರತ್ತುಗಳು ಅನ್ವಯ:
ಒತ್ತಾಯ ಇಲ್ಲ ಯಾರಿಗೂ. ಆದರೆ ಸಹಾಯ ಮಾಡಲಾಗದಿದ್ದರೂ ಇನ್ನೊಬ್ಬರು ಮಾಡುವ ಕೆಲಸ ಕಂಡು ಕುಹಕವಾಡದಿರಿ.

https://www.facebook.com/spchauta/posts/10151424602373674