ಕನಸು?

ಬರಿದೆ
ಬಣ್ಣಗಳನಳೆಯುತ್ತಿದ್ದೇನೆ
ಚಿತ್ತ ಭಿತ್ತಿಯಲಿ
ಸಾವಿರ ಚಿತ್ರಗಳು
ಹುಟ್ಟುತ್ತಿವೆ!

Advertisements

ಅಭಿಮಾನ!

ಹುಟ್ಟಿದ ಊರಿನ ಮೇಲಿರುವ ಅಭಿಮಾನಕ್ಕೂ ದೇಶದ ಬಗೆಗಿರುವ ಅಭಿಮಾನಕ್ಕೂ ಹೆಚ್ಚು ವ್ಯತ್ಯಾಸವಿಲ್ಲ.ಯಾವ ಪರಿಸ್ಥಿತಿಯಲ್ಲಿದ್ದರೂ ಎಂದಿಗೂ ಓಡಿಹೋಗುವ ಮನಸು ಬರುವುದಿಲ್ಲ.
ಉದರನಿಮಿತ್ತ ಇತರೇ ಊರುಗಳನ್ನು ಅವಲಂಬಿಸಬೇಕಾದದ್ದು ಅನಿವಾರ್ಯತೆ.

ಆಪರೇಷನ್!

ಡಾಕ್ಟರರೇ ಏನು ಸುದ್ದಿ?
ಏನಿಲ್ಲ ಪುಷ್ಪಣ್ಣ, ಮಾಜಿಪ್ರಧಾನಿ ದೇವೆಗೌಡರು ಆಸ್ಪತ್ರೆಗೆ…. ಬಂದಿದ್ದರುzzzz..

ಹೋಯ್ ಪತ್ರಕರ್ತ ಪರಮೇಶಣ್ಣ ಯಾವ ಕಡೆ ಓಡ್ತಾ ಇದ್ದೀರಿ?
ಪುಷ್ಪಣ್ಣ, ಆಮೇಲೆ ಮಾತಾಡ್ತೇನೆ, ಒಂದು ಸ್ಟಿಂಗ್ ಆಪರೇಷನ್ ಅರ್ಜೆಂಟ್ ಉಂಟು!
———–

ಇಲ್ಲಿಗೆ ನಮ್ಮ ವಾರ್ತಾಪ್ರಸಾರ ಮುಗಿಯಿತು. ಮುಂದಿನ ಇಂಜೆಕ್ಷನ್ನೊಂದಿಗೆ ಮತ್ತೆ ಭೇಟಿಯಾಗೋಣ.

ಫ್ಲೇವರ್ಡ್ ನ್ಯೂಸ್ ಇನ್ ಫ್ಲವರ್ ಟಿವಿ.