ಫ್ರೆಂಡ್-ಶಿಪ್ ಫ್ರೇಮ್ಡ್!

ರಾತ್ರಿ ಹತ್ತೂವರೆ ಸರಿಸುಮಾರು. ಬಿಡುವಿಲ್ಲದ ವೈಯಕ್ತಿಕ ಕೆಲಸ ಕಾರ್ಯಗಳಿಂದ ಸುಸ್ತಾಗಿ ಅಡುಗೆ ಮಾಡಲಾಗದ ಪರಿಸ್ಥಿತಿಯಲ್ಲಿ ಬೆಂಗಳೂರು ವೈಟ್-ಫೀಲ್ಡಿನ ತೂಬರಹಳ್ಳಿ ಸಮೀಪದ ಹೋಟೇಲೊಂದರಲ್ಲಿ ಕೂತು ಅದ್ಯಾವುದೋ ವೆಜ್ ಬಿರಿಯಾನಿ ಆರ್ಡರ್ ಮಾಡಿ, ಮೊಬೈಲ್ ಮುಖಾಂತರ ಫೇಸ್ಬುಕ್ಕಿನಲ್ಲಿ ಸನ್ಮಾನ್ಯ ಮಿತ್ರರಾದ ವಾಷಿಂಗ್ಟನ್ ಶ್ರೀವತ್ಸ ಜೋಶಿಯವರ “ಸರ್…! ನೇಮೂ ಸೇಮು; ಸರ್‌ನೇಮೂ ಸೇಮು” ಎಂಬ ಸ್ಟೇಟಸ್ ಅಪ್ಡೇಟಿಗೆ ಬಂದ ಕಮೆಂಟುಗಳನ್ನು ಓದುತ್ತಿದ್ದಂತೆ ವಿನಾಯಕ್ ಭರತ್ ಶೆಣೈ ಎಂಬವರ ಫ್ರೆಂಡ್ ರಿಕ್ವೆಸ್ಟ್ ಬಂತು. 

ಪರಿಶೀಲಿಸಿ ಮನವಿಯನ್ನು ಸ್ವೀಕರಿಸಿದ ಮರುಕ್ಷಣಕೆ ಅತ್ತಲಿಂದ ವಿನಾಯಕರ ಸಂದೇಶವೊಂದು ನನ್ನ ಇನ್ಬಾಕ್ಸ್ ಸೇರಿತ್ತು. 
“ಹಾಯ್ ಪುಷ್ಪರಾಜ್, ಡು ಯು ರಿಮೆಂಬರ್ ಮಿ ಫ್ರಮ್ ಮಿಲಾಗ್ರೀಸ್?
ಪ್ರತುತ್ತರವಾಗಿ ನಾನಂದೆ;
“ಹೆಲೋ, ಐ ಯಾಮ್ ಸಾರಿ, ಐ ಕಾಂಟ್ ರಿಮೆಂಬರ್, ಈಸ್ ಇಟ್ ಕಲ್ಯಾಣ್-ಪುರ್ ಮಿಲಾಗ್ರಿಸ್?
“ನೋ, ಎಟ್ ಮ್ಯಾಂಗಲೋರ್”
ಅಂತೂ ಪರಿಚಯದ ಸುಳಿವು ನನಗೆ ಸಿಗಲೇ ಇಲ್ಲ. ಕೊನೆಯ ದಾರಿಯೆಂಬಂತೆ ನನ್ನ ದೂರವಾಣಿ ಸಂಖ್ಯೆಯನ್ನಿತ್ತು ಕರೆ ಮಾಡಿ ಅಂದೆ. ಐದು ನಿಮಿಷದ ನಂತರ ದೂರದ ದುಬೈನಿಂದ ಬಂದ ಕರೆ ಸ್ವೀಕರಿಸಿದರೆ “ಶೆಣೈ ಮಾಮ್” ಮಾತಿಗಿಳಿದಿದ್ದರು. ಮುಂದಿನದೆಲ್ಲ ಪಾತ್ರ ಪರಿಚಯ. ವಿಚಾರವಿನಿಮಯ. ಉಭಯ ಕುಶಲೋಪಹಾರಿ. ಊರು, ಕೇರಿ, ಸ್ಕೂಲ್, ಕಾಲೇಜು ಕಟ್ಟೆ ಸವೆಸಿದೆಲ್ಲಿ ಎಂಬ ಮಾತು ಮುಗಿದು ಸಾಂಪ್ರತದ ಸರ್ವೇ!

ವಿಚಾರ ಇಷ್ಟೇ. ಶ್ರೀಯುತ ಶೆಣೈ ಅವರು ಮಂಗಳೂರಿನ ಮಿಲಾಗ್ರಿಸ್-ನಲ್ಲಿ ಓದುತ್ತಿದ್ದಾಗ ಅವರ ಕ್ಲಾಸಿನಲ್ಲೂ ‘ಪುಷ್ಪರಾಜ ಚೌಟ’ನೆಂಬೊಬ್ಬ ‘ಹೀರೋ ಅಲಿಯಾಸ್ ಪೆಟ್ಟಿಸ್ಟ್’ (ಪೆಟ್ಟಿಸ್ಟ್=’ನಾಮ’ಪದ ಫಾರ್ ಕ್ಲಾಸ್ ರೌಡಿಸಂ ಇನ್ ತುಳು ಲಾಂಗ್ವೇಜ್) ಇದ್ದರೆಂದು ಅವರೇ ನಾನೆಂದು ಊಹಿಸಿ ಮಿತ್ರತ್ವದ ಮನವಿ ಕಳುಹಿಸಿದರಂತೆ. ಅವರ ಜೊತೆಗೆ ಬೆಂಚ್ ಬಿಸಿ ಮಾಡುತ್ತಿದ್ದ ಸುಧೀರ್ ಭಂಡಾರ್ಕರ್, ಶೆಣೈ ಅವರ ಕಸಿನ್ ಆದ ಮೃತ್ಯುಂಜಯ್ ಭಂಡಾರ್ಕರ್ ನನ್ನ ಫ್ರೆಂಡ್ಸ್ ಲಿಸ್ಟ್-ನಲ್ಲಿದ್ದುದೇ ಈ ಅವಾಂತರಕೆ ಕಾರಣ. ನಾನು ಪೆಟ್ಟಿಸ್ಟ್ ಅಲ್ಲದಿದ್ದರೂ, ಕೆಲವರು ಹಲವು ಬಾರಿ ನನ್ನ ಕೈಯಿಂದ ಪೆಟ್ಟು ತಿಂದಿದ್ದರಿಂದಲೂ, ನಾನೂ ಹಲವು ಬಾರಿ ಕೆಲವರಿಂದ ಪೆಟ್ಟಿನ ರುಚಿ ಕಂಡಿದ್ದರಿಂದಲೂ ಆ ‘ನೇಮೂ’ ಸೂಕ್ತವೆನಿಸಿ ಒಮ್ಮೆ ನಕ್ಕೆ, ಶೆಣೈ ಅವರ ಜೊತೆಗೂಡಿ! 

ಅಂತೂ ಶ್ರೀವತ್ಸ ಜೋಶಿಯವರ “ಸರ್…! ನೇಮೂ ಸೇಮು; ಸರ್‌ನೇಮೂ ಸೇಮು” ಸ್ಟೇಟಸ್ಸಿನ ದಿನವೇ ಈ ವಿನಾಯಕ್ ಶೆಣೈ ಮತ್ತು ನನ್ನ ಗೆಳೆತನ ‘ಫ್ರೇಮ್’ ಆಗಿದ್ದು! 

https://www.facebook.com/spchauta/posts/10152000482508674

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s