ಮೌನವೇತಕೆ ಮನವೇ ಮಾನ ಮರೆಯಾಗುತಿರಲು?

ನಾನು ನನ್ನ ದೇಶದ 65 ‘ಸಂಸದರನ್ನು’ ಉಚ್ಚಾಟಿಸಿ ಎಂದು ಅಮೆರಿಕಕ್ಕೆ ಪತ್ರ ಬರೆಯುವ ಅಗತ್ಯ ನನಗೆ ಕಾಣದು. ಇದು ದೇಶವೆಂಬ “ನನ್ನ ಮನೆಯೊಳಗಿನ” ಮಾತು! ಮೂರನೆಯವರ ಮುಂದೆ ನನ್ನ ಮಾನ ಹರಾಜಿಗಿಡಬೇಕಾದ ನೀಚ ಬುದ್ಧಿ ನನಗೆ ತರವಲ್ಲ.

ಮನಸ್ಸು ರಾಜಕೀಯ ವಾತಾವರಣದಿಂದ ಹೊರಬಂದು ಪ್ರಾಮಾಣಿಕವಾಗಿ ಒಮ್ಮೆ ಸಣ್ಣ ಆಲೋಚನೆಯನ್ನು ಮಾಡಿ, ನಾವು ನಮ್ಮ ದೇಶದ ಮರ್ಯಾದೆಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದೇವೆ ಎನ್ನುವ ಅಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮನದಾಳದಲ್ಲಿ ನೋವೊಂದು ಕಾಡದಿರಲಾರದು. ಆ ನೋವು ಬಹುಶಃ ನನಗಷ್ಟೇ ಅಲ್ಲ, ಹೇಳಿಕೊಳ್ಳಲಾಗದ ಹತ್ತು ಹಲವು ಕೋಟಿ ಪ್ರಜೆಗಳ ಮನದಲ್ಲಿ ಹುಟ್ಟದಿದ್ದೀತೆ? 

ರಾಜಕೀಯದ ರಗಳೆಯೇ ನನಗೆ ಬೇಡ, ನಾನು ನ್ಯೂಟ್ರಲ್ ಎನ್ನುವ ನಮ್ಮೆಲ್ಲರ ನಡುವೆ ಬದುಕುವ ಸಾಮಾನ್ಯ ಪ್ರಜೆ ಎನಿಸಿಕೊಂಡವರು ನಮ್ಮ ನಡುವೆ ಹಲವರಿದ್ದಾರೆ ಅನ್ನುವುದು ನಾನು ಗಮನಿಸಿದ ‘ವಿಚಾರ. ನಮ್ಮ ಈ ತಟಸ್ಥ ನಡೆಯೇ ಬಹುಶಃ ಇಂತಹ ಆಘಾತಕಾರಿ ಬೆಳವಣಿಗಳಿಗೆ ಎಡೆಮಾಡಿಕೊಡುತ್ತಿದೆ ಎನ್ನುವ ಗಂಭೀರ ಆಪಾದನೆಯನ್ನು ಮಾಡಲೇಬೇಕಾದ ಅನಿವಾರ್ಯತೆ ನನಗಿದೆ. ಮತಗಟ್ಟೆಗಳ ಮುಖ ನೋಡದ ಪ್ರಜ್ಞೆತಪ್ಪಿದ ಪ್ರಜೆಗಳಿದ್ದಾರೆ ನಮ್ಮಲ್ಲಿ, ಆಮಿಷಕ್ಕೊಳಗಾಗಿ ಕಳ್ಳಕಾಕರ ಕೈಮೇಲೆತ್ತುವ ಕದೀಮ ಮತದಾರರಿದ್ದಾರೆ ನಮ್ಮಲ್ಲಿ. ಇಂಥವರುಗಳು ಬದಲಾಗದ ಹೊರತು ಸಂಸತ್ತಿನ ಬಾಗಿಲಿಗೆ ರಂಗೋಲಿ ಹಾಕಲು ನಾವು ಕಳುಹಿಸುವುದೂ ಮಂದಮತಿಗಳನ್ನೇ, ಅರೆಬೆಂದ ಮಾಂಸದ ಮುದ್ದೆಗಳನ್ನೇ ಹೊರತು, ದೇಶದುದ್ಧಾರಕ್ಕಾಗಿ ದುಡಿವ ಧೈರ್ಯವಂತರನ್ನಲ್ಲ. ಶೀಲವಂತರನ್ನಲ್ಲ!

ಯಾರದೋ ಹೆಬ್ಬೆಟ್ಟಿನ ಬಲಕೆ,ಸಂಸತ್ತೆಂಬ ದೇಶದ ಮೇರುಗುಡಿಯ ಒಳಹೊಕ್ಕುವ ಈ ಭೂತಗಳ ಚೇಷ್ಟೆ ನಿಯಂತ್ರಿಸುವವರಾರು? ಅಲ್ಲೊಬ್ಬ ”ಪ್ರಧಾನ” ದೇವರಿರಬೇಕು. ನಾಯಕನಾಗಿ ಆತ ಮಾಡಬೇಕಾದದ್ದು, ಮಾತನಾಡಬೇಕಾದದ್ದು ಅವನ ಧರ್ಮ. ತನಗೆಲ್ಲ ಅನುಭವವಿದ್ದರೂ, ತಾನೆಲ್ಲವನೂ ಬಲ್ಲವನಾಗಿದ್ದರೂ ಆತನೂ ಮೌನವಹಿಸಿ ಸಿಂಗಳೀಕನಾದರೆ, ದೇಶವೆಂಬ ಪ್ರಕೃತಿ ಹದಗೆಡುವುದು ನಿಜ. ಆ ಪ್ರಧಾನ ದೇವರೂ ತನ್ನ ಜುಟ್ಟನ್ನೂ ಇನ್ನೊಬ್ಬರ ಕೈಗಿತ್ತು ತಾನು ಏನೂ ಅರಿಯದವನಂತೆ ಕೂತರೆ ದೇಶದ ಮರ್ಯಾದೆಗೆ ಧಕ್ಕೆ ಬರಬಹುದೇ ಹೊರತು, ಮಾನ ಉಳಿಯುವ ಮಾತಿಲ್ಲ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s