ನಿರರ್ಗಳವಾಗುಲಿವುದ ಕಲಿತರೆ, ಉಳಿದೀತೂ ನನ್ನುಲಿಯು!

ಅತಿ ಕಿರಿಯನಾದರೂ ಭಾಷಾಪ್ರೌಢಿಮೆಯಿಲ್ಲವಾದರೂ ನಾನೊಂದೆರಡು ಮಾತುಗಳನ್ನು ಹೇಳಲೇಬೇಕೆನಿಸಿತು. ಕನ್ನಡ ಸರಳೀಕರಣ, ಮಹಾಪ್ರಾಣ ಕೈಬಿಡಿ ಎನ್ನುವ ಭರದಲ್ಲಿ ಇರುವ ಕನ್ನಡವನ್ನೂ ಕೂಡ ನೀವು ಮರೆಸುತ್ತೀರೇನೋ ಅಥವಾ ಸರಳೀಕರಣ ಎನ್ನುವ ವಿಷಯವಸ್ತುವನ್ನು ಆರಿಸಿಕೊಂಡು ಸದ್ಯಕ್ಕೆ ನಮ್ಮದೇ ಬೆಂಗಳೂರಿನ ಯಾವ ಮಕ್ಕಳೂ ಮಾತನಾಡದ (ಎಲ್ಲ ಮಕ್ಕಳೂ ನಾನು ಕಂಡಂತೆ – ಹೇಯ್ ವಾಟ್ಸ್ ದ ಟೈಮ್ ಯಾ?), ಅಂದರೆ ಇವರೆಲ್ಲ ಲಾರ್ಡ್ ಮೌಂಟ್ ಬ್ಯಾಟನ್ನನಿಗೆ ಹುಟ್ಟಿದ ಮಕ್ಕಳಂತೆ ವರ್ತಿಸುವುದನ್ನು ನೋಡಿದಾಗ ಕನ್ನಡ ಭಾಷೆ ಅನ್ನುವುದೊಂದಿತ್ತ? ಎನ್ನುವ ಕಾಲ ಬರದಿರಲಿ. 

ಇರುವುದನ್ನು ಎಲ್ಲರಿಗೂ ತಲುಪಿಸುವ ಪ್ರಯತ್ನ ಮಾಡಿ. ಅದನ್ನು ಬಿಟ್ಟು ಅದು ಬೇಡ ಇದು ಬೇಡ. ಇದು ಸರಿಯಿಲ್ಲ ಅದು ಸರಿಯಿಲ್ಲವೆಂದಾದರೆ ಭಾಷೆ ಎನ್ನುವ ಉಗಮ ಎಲ್ಲಾಯ್ತು? ಹೇಗಾಯ್ತು ಅನ್ನುವುದನ್ನ ಕಂಡು ಹಿಡಿಯಿರಿ ಅಲ್ಲಿಂದಲೇ ಭಾಷೆಯ ‘ರಿಪೇರಿ’ ಕಾರ್ಯವನು ಶುರು ಮಾಡೋಣ. ನಾನೂ ನಿಮ್ಮ ಜೊತೆಗೂಡುತ್ತೇನೆ. 

ಅಲ್ಲದೇ ಭಾಷೆ ಹೇಗೆ ಬೆಳೆಯಿತು, ಒಂದಕ್ಕೊಂದು ಹೇಗೆ ತಮ್ಮ ನಂಟು ಬೆಳೆಸಿಕೊಂಡವು? ಒಂದಕ್ಕೊಂದು ತಮ್ಮನ್ನು ಹೇಗೆ ಅನುರೂಪಗೊಳಿಸಿಕೊಂಡವು ಅನ್ನುವುದನ್ನೂ ಕೂಡ ಮನನ ಮಾಡಿಕೊಳ್ಳೋಣ. ಸರಳೀಕರಣ, ಮಹಾ’ಪ್ರಾಣ’ ತ್ಯಾಗ ಮಾಡಲು ಹೊರಡುವುದು ನಂತರದ ವಿಚಾರವಾಗಲಿ. ಮೊನ್ನೆ ಮೊನ್ನೆ ‘ನಾನು ಕನ್ನಡವನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ’ ಎನ್ನುತ್ತಿರುವ ನನ್ನ ಫೇಸ್ಬುಕ್ ಮಿತ್ರರೊಬ್ಬರ ಮಗ ನನಗೆ ಮಾತಿಗೆ ಸಿಕ್ಕಾಗ ಅರ್ಧ ಗಂಟೆ ನನ್ನ ಜೊತೆ ಅವರು ಕೊರೆದದ್ದು ಅಪ್ಪಟ ‘ಆಂಗ್ಲ’ದಲ್ಲೇ. ಈವನ್ ಐ ಹ್ಯಾವ್ ಟ್ರೈಡ್ ಟು ಸ್ಪೀಕ್ ವಿಥ್ ಹಿಮ್ ಇನ್ ಅವರ್ ಓನ್ ಕನ್ನಡ ಲಾಂಗ್ವೇಜ್, ಹಿಸ್ ರೆಸ್ಪಾನ್ಸ್ ವಾಸ್ ‘ಹೇಯ್, ಐ ಡೋಂಟ್ ನೊ ಮಚ್ ಕನ್ನಡ, ಐ ಕ್ಯಾನ್ ಅಂಡರ್-ಸ್ಟ್ಯಾಂಡ್” ಎಂದರು! ಇವರಪ್ಪ ಕನ್ನಡ ಸರಳೀಕರಣದ ಬೊಗಳೆ ಬಿಗಿಯುತ್ತಾರೆ ನನ್ನಲ್ಲಿ!

ನಾವ್ಯಾರೂ ಮೌಂಟ್ ಬ್ಯಾಟಣ್ಣನ ಮಕ್ಕಳಲ್ಲ. ಸಂಸ್ಕೃತ ಬೇಡ, ಹಿಂದಿ ಬೇಡ, ತಮಿಳು ಬೇಡ, ತೆಲುಗು ಬೇಡ ಎನ್ನುವವರು ಇಂಗ್ಲಿಶ್ ಬಳಕೆ ಯಾಕೆ ಮಾಡುತ್ತೀರಿ? ಉಷಾ, ಉಸಾ, ದೋಷ, ದೋಶವೆಂದು ನಾಳೆ ಇನ್ನೂ ಸರಳೀಕರಣಗೊಳಿಸುವ ಚಿಂತನೆ ನಡೆಸಿ ಎಲ್ಲ ದೋಷಗಳು ಕೊನೆಗೊಂದು ದಿನ ದೋಸೆಯಾದರೂ ವಿಪರ್ಯಾಸವೇನಿಲ್ಲ.

ಇನ್ನು ಮೈನಾರಿಟಿ ಮೆಜಾರಿಟಿಗಳು ಭಾಷೆಯ ಬಳಕೆಯಲ್ಲಿ ಯಾಕೆ ಬರುತ್ತವೋ ನನಗಂತೂ ವಿಚಿತ್ರವೆನಿಸಿತು. ಇದು ಪೂರ್ವಾಗ್ರಹ ಪೀಡಿತವೆಂದೆ ನಾನು ಕರೆಯುತ್ತೇನೆ. ಈ ಬಗ್ಗೆ ಹೆಚ್ಚಿನ ಮಾತು ನನ್ನ ಬಳಿ ಇಲ್ಲ.

ಕೊನೆಗೊಂದು ಮಾತು ಅಪ್ಪಟ ಕನ್ನಡಿಗನಾಗಿ;
ಮೊದಲು ನಾವು ಸರಿಯಾಗಿ ಕನ್ನಡವನ್ನು ಬಳಸುವುದನ್ನು ಕಲಿಯೋಣ. ಮಾತನಾಡುವುದನ್ನು ಕಲಿಯೋಣ.ಕನ್ನಡವನ್ನೇ ಉಲಿಯೋಣ. ಹಾಗಾದಲ್ಲಿ ತನ್ನಿಂತಾನೆ ಕನ್ನಡ ಉಳಿಯುತ್ತದೆ.

Advertisements

2 comments on “ನಿರರ್ಗಳವಾಗುಲಿವುದ ಕಲಿತರೆ, ಉಳಿದೀತೂ ನನ್ನುಲಿಯು!

  1. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

    ಬಳಕೆಯಲ್ಲಿ ಇಲ್ಲದಿದ್ದರೆ ಭಾಷೆಯಾದರೂ ಹೇಗೆ ಬೆಳೆಯಬಲ್ಲದು, ಉತ್ತಮ ಬರಗ.

  2. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

    ಬಳಕೆಯಲ್ಲಿ ಇಲ್ಲದಿದ್ದರೆ ಭಾಷೆಯಾದರೂ ಹೇಗೆ ಬೆಳೆಯಬಲ್ಲದು, ಉತ್ತಮ ಬರಹ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s