ಅಡಿಯಾಳು!

ಎತ್ತರಕೆ ಬೆಳೆದೆ…
ಗೋಚರಿಸಲಿಲ್ಲ ದಾರಿ
ಅಡಿಯನಿಡುವಾಗ…

ನೆತ್ತರು ಬಂತೀಗ
ಕಾಣದ ಮುಳ್ಳೊಂದು 
ನೆಕ್ಕಿ ಪಾದವ!

Advertisements

ನನ್ನ ಮತ!

ಬೀದಿನಾಯಿಗೆ ಬಿಸ್ಕಿಟ್ ಹಾಕುವ ಪ್ರಮೇಯ ನನಗೆ ಬಂದಿಲ್ಲ. ಮನೆ ಕಾಯ್ದು, ಬಾಲವಲ್ಲಾಡಿಸುವ ಪ್ರಾಮಾಣಿಕ ನಾಯಿಯನ್ನೇ ಮನೆಯಲ್ಲಿ ಸಾಕುತ್ತೇನೆ!

 

https://www.facebook.com/spchauta/posts/10151621256093674

ಹಾಳಲ್ಲ ಹಾಲು!

ಬಿಳಿಯ ಬೆಳಗಲ್ಲಿ ಬಾಲ್ಯವದು ಹಾಲು, 
ಮೊಸರೆನಲೇ ಕೌಮಾರ್ಯವ?
ಹುಳಿ ಜಾಸ್ತಿಯಾಗಲದು ಹಾಳು!
ಕಡೆಗೋಲೊಳು ತಿರುವಿದೆಡೆ ಬೆಣ್ಣೆ,
ಇಪ್ಪತ್ತರಿಂದರುವತ್ತರ ಪ್ರಾಯ
ರುಚಿಯಿಪ್ಪುದಲ್ಲಿ ಸವಿಯಲದು ಬಾಳು,
ಕುದಿ ಕುದಿದು ತುಪ್ಪ
ಇನ್ನು ಕಡೆಯುವಂತಿಲ್ಲ ಕೊನೆಯ ಪಾಲು,
ಹಚ್ಚಬಹುದೂ ಬತ್ತಿ ಅದ್ದಿ ಆ ತುಪ್ಪದೊಳು…

ಬೆಳಗಬಹುದಲ್ಲ ಹಾಲು? ಹಾಳಲ್ಲ ಹಾಲು!

ಸುಖ!

ಹರಿದರಿವೆಯ ಮೈ, ಪರಿಪರಿಯ ತೇಪೆ,
ಭಯದ ತವರೊಳು ಒಳಗೊಳಗೆ ಕನಸು
ಬರಿಯ ಕರದಲಿ, ಬಿಸಿಲ ದಾರಿಯು…

ಬೆದರಲೇತಕೆ ನಾನು, ಬೆವರ ಸುರಿಸೆ
ಬರಸೆಳೆಯದೇ ಬಾಳು ಮುದದಲಿ,
ನಗುವನಿತ್ತು ನಡೆವ ದಾರಿಯಲಿ?

ನಿಸ್ವಾರ್ಥ!

ತೊರೆ, ಹಳ್ಳ, ದಿಣ್ಣೆ, ತೋಡುಗಳ ನೀರನ್ನು ನದಿ ತನ್ನೊಡಲಿಗೆ ಸೇರಿಸಿಕೊಂಡರೂ ಅದು ‘ನದಿ’ಯೆಂದೇ ಕರೆಯಲ್ಪಡುತ್ತದೆ. 

ಬೇಸಿಗೆಯಲಿ ನೀರಾರಿ ತನ್ನೊಡಲ ಮರಳ ತೋರಿಸಿ ಬೆತ್ತಲಾದರೂ ಕಡಲಿಂದ ನೀರನ್ನು ವಾಪಸ್ಸು ಕೇಳುವುದಿಲ್ಲ.

 

https://www.facebook.com/spchauta/posts/10151599728573674