ದೀಪ್ತಿ – ೪೯

ಮುರುಕು ಮಾತಿನಲಿ ಮುರಿಯದಿರು ಮೈತ್ರಿಗಳ ಕಂಪು, 
ಒಡಕಮೂಡಿಸೆ ಮನನೊಂದು ಎಲ್ಲಿಹುದು ಸವಿಸೊಂಪು,
ಸಮಭಾವದೊಳು ಸಾರವಿರೆ, ಮುಚ್ಚುಮರೆ ಸಲ್ಲ ಶಿರ್ವಜ್ಞ|
=======

ಕೆಲವೊಂದು ಸಂಬಂಧಗಳು ಬಂದಷ್ಟೇ ವೇಗದಲ್ಲಿ ಹೊರಟುಹೋಗುತ್ತವೆ. ಮಾತು ನಿಲ್ಲಿಸುತ್ತವೆ ಮೌನಕ್ಕೆ ಶರಣಾಗಿ. ಆದರೆ ಆ ಮೌನವನ್ನು ಮುರಿದು ಆ ನಂಟು ಕಡಿದುಕೊಳ್ಳುವ ಹಿಂದಿನ ಕಾರಣವನ್ನು ಅವಲೋಕನ ಮಾಡಿಕೊಳ್ಳುವ ಮನಸ್ಥಿತಿ ನಮಗಿಲ್ಲ. ಇದೇ ಸಲಹೆ ನನ್ನ ಮಿತ್ರೆಯೊಬ್ಬರು ನನಗಿವತ್ತು ನೀಡಿದರು. ಯಾವುದೋ ಕಾರಣಕ್ಕೆ ಮುರಿದ ಬಂಧವೊಂದನ್ನು ಮತ್ತೆ ಸರಿಪಡಿಸಿಕೊಳ್ಳಬಾರದೇಕೆ ಎನ್ನುವ ಆಕೆಯ ಸಲಹೆ ಸೂಕ್ತ ಎನಿಸಿತು.

ಮೌನ ಮುರಿದು ಮತ್ತೆ ಮಾತಾಡೋಣ… ಮುರುಕು ಮಾತುಗಳಲ್ಲಿ ಮುರಿದು ಹೋದ ಮೈತ್ರಿಗಳನ್ನು ಮತ್ತೆ ಮನದ ಮಾತಾಗಿಸೋಣ! ಸಮಭಾವ ಬರಲಿ! ಸಾರವಿರಲಿ, ಮುಚ್ಚುಮರೆಯಿಲ್ಲದೆ! ಕಾರಣಗಳು ನಗಣ್ಯವಾಗಲಿ!

[Chaitra R Srivastava]

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s