ವ್ಯತ್ಯಾಸದೊಳಗೆ ಇಂದು ನಿನ್ನೆಗಳು!

ಬರೆಯುತ್ತಾ ಯಾವುದೋ ಭಾವದ ತೆಕ್ಕೆಯೊಳಗೆ ಜಾರುತ್ತಿದ್ದವನನ್ನು ಎಚ್ಚರಿಸಿದ್ದು, ಟ್ಯೂಬ್ ಲೈಟ್ ಪಕ್ಕದಲ್ಲಿ ಲೊಚಗುಟ್ಟುತ್ತಿದ್ದ ಹಲ್ಲಿ. ಗೋಡೆಯ ಮೇಲೆ ಸ್ವಚ್ಚಂದವಾಗಿ ವಿಹರಿಸುತ್ತಿದ್ದ ಜಿರಲೆಯೊಂದರ ತಲೆ ಮರುಕ್ಷಣದಲ್ಲಿ ಆ ಹಲ್ಲಿಯ ಬಾಯೊಳಗೆ ಸಿಕ್ಕಿಕೊಂಡಾಗ ನನಗೂ ಸ್ವಲ್ಪ ಖುಷಿಯಾಗಿತ್ತು. ಜಿರಲೆಯನ್ನು ನಾನು ಕೊಂದು ಪಾಪಿಯಾಗಬೇಕಾದ ಪ್ರಮೇಯಬಂದಿಲ್ಲವೆಂದು. ಇದು ನಿನ್ನೆಯ ಬದುಕು!

ಇಂದು ಸಂಜೆ ಕಚೇರಿಯಿಂದ ಬಂದವನೇ ಬಚ್ಚಲು ಮನೆಗೆ ಕಾಲಿಟ್ಟಾಗ ಟಬ್ಬಿನೊಳಗೆ ಬಿದ್ದ ಹಲ್ಲಿಯೊಂದು ಮೇಲೆ ಹತ್ತಲಾಗದೇ ಹೆಣಗಾಡುತ್ತಿತ್ತು. ಪಕ್ಕದ ಗೋಡೆಯಲಿ ಮೀಸೆ ಚಿಗುರಿದ ಜಿರಲೆ ನನ್ನನ್ನು ಅಣಕಿಸಿ ಗಹಗಹಿಸಿ ನಕ್ಕಂತೇ ಅನಿಸಿತು. ಮುಖ ತೊಳೆಯಲು ಮನಸಾಗದೇ ಹೊರ ಬಂದು ಮೌನಿಯಾಗಿ ಕುಳಿತೆ.

ಬದುಕು ಎಷ್ಟು ವ್ಯತ್ಯಾಸ, ನಿನ್ನೆಗೂ ಇಂದಿಗೂ!

Advertisements

2 comments on “ವ್ಯತ್ಯಾಸದೊಳಗೆ ಇಂದು ನಿನ್ನೆಗಳು!

  1. Ravi Tirumalai ಹೇಳುತ್ತಾರೆ:

    ಒಂದು ಬಾರಿ ಒಂದು ಚಿಕ್ಕ ಮಗುವನ್ನು ಕರೆದುಕೊಂಡು ಊರ ಹೊರಗೆ ಬಂದಿದ್ದ ಒಬ್ಬ ಸಾಧುವನ್ನು ನೋಡಲು ದಂಪತಿಗಳಿಬ್ಬರೂ ಹೋದರಂತೆ. ಶುಬ್ರ ವಸ್ತ್ರ ಮತ್ತು ಆಕರ್ಷಕ ಬಿಳಿಯ ಗಡ್ಡವನ್ನು ಹೊಂದಿದ್ದ ಆ ಸಾಧುವನ್ನು ನೋಡಿದ ತಕ್ಷಣ ಆ ಮಗುವು ತಾಯಿಯ ಕೈಯಿಂದ ಜಾರಿ ಇಳಿದು ಹೋಗಿ ಆ ಸಾಧುವಿನ ತೊಡೆಯ ಮೇಲೆ ಕುಳಿತುಕೊಂಡು ಅವರ ಗದ್ದದಿಂದ ಆಕರ್ಷಿತನಾಗಿ, ಅವರ ಗಡ್ಡವನ್ನು ಎಳೆಯಿತಂತೆ. ” ಹಾ” ಎಂದು ಸಾಧು ಉದ್ಘಾರ ತೆಗೆದಾಗ ಸಂತಸಿದ್ದು ತಾಯಿ.” ನೋಡ್ರೀ ನಮ್ಮ ಮಗ ಆ ಸಾಧುಗಳ ಗಡ್ಡ ಎಷ್ಟು ಚೆನ್ನಾಗಿ ಎಳೆದ” ಎಂದು. ಅರಿಯದಾ ಮಾಡು ಎಳೆದರೂ ಅರಿತು ಆ ಸಾಧುವಿಗೆ ನೋವುಂಟು ಮಾಡಿದವಳು ಆ ತಾಯಿ. ಮಗುವಿನದು ಕ್ರಿಯೆ ಮಾಡಿದರೂ ” ಅಕರ್ಮ” ಸಕ್ರಿಯಳಲ್ಲದಿದ್ದರೂ ತಾಯಿಯದು ” ಕರ್ಮ”

  2. Paresh ಹೇಳುತ್ತಾರೆ:

    ಬಹಳ ಸೂಕ್ಷ್ಮವಾಗಿ ಭಾವವನ್ನು ಹೆಣೆದು ಕೆಲವೇ ಶಬ್ಧಗಳಲ್ಲಿ ಪ್ರಸ್ತುತ ಪಡಿಸಿದ ರೀತಿ ಅದ್ಭುತ.. ಚಿಂತನೆಗೆ ಒರೆ ಹಚ್ಚುವ ಬರಹ.. ಶುಭವಾಗಲಿ :))

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s